ಚುನಾವಣೆಗೆ ಸ್ಪರ್ಧಿಸುವ ಉದ್ದೇಶವಿಲ್ಲ: ಸುದತ್ತ ಸ್ಪಷ್ಟನೆ



 

ಮೂಡಬಿದಿರೆ: ಕಾರ್ಮಿಕರ ಸಮಸ್ಯೆಗಳೂ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ವಿವಿಧ ಕಾರಣಗಳನ್ನಿರಿಸಿಕೊಂಡು ಶಿರ್ತಾಡಿ ಗ್ರಾ.ಪಂ. ಕಚೇರಿಯೆದುರು ಮೇ 2ರಿಂದ 6ರವರೆಗೆ ತಾವು ನಡೆಸಿದ ಉಪವಾಸ ಸತ್ಯಾಗ್ರಹಕ್ಕೂ ಮುಂಬರುವ ಗ್ರಾ.ಪಂ. ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ ಸುದತ್ತ ಜೈನ್ ಸ್ಪಷ್ಟಪಡಿಸಿದರು.

 

 

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 2009ರಿಂದಲೂ ದ.ಕ. ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆರೋಗ್ಯ, ಉದ್ಯೋಗ, ವೇತನ ಭದ್ರತೆಯೇ ಮೊದಲಾದ ವಿಷಯಗಳಲ್ಲಿ ಜನರಿಗಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರವನ್ನು ಒತ್ತಾಯಿಸಲು ತಾವು ಸತ್ಯಾಗ್ರಹಗಳನ್ನು ನಡೆಸುತ್ತ ಬಂದಿದ್ದು ಶಿರ್ತಾಡಿ ಗ್ರಾ.ಪಂ.ನಲ್ಲಿ  ನಡೆಸಲಾಗಿರುವ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿಗಳು, ಸಂಸದರು, ಉಸ್ತುವಾರಿ ಸಚಿವರು ನಿರ್ಲಕ್ಷಿಸಿದ್ದಾರೆ. ಸತ್ಯಾಗ್ರಹದ ಬಗ್ಗೆ ಗ್ರಾ.ಪಂ.ನಲ್ಲಿ  ನಡೆದ ತುರ್ತುಸಭೆಯಲ್ಲಿ ಬಿಜೆಪಿ ಸದಸ್ಯರು ಗೈರು ಹಾಜರಾಗಲು ಸಂಸದರ ಕುಮ್ಮಕ್ಕೇ ಕಾರಣ ಎಂದು ಆರೋಪಿಸಿದರು.  ಯಾರೇ ಅಧಿಕಾರದಲ್ಲಿರಲಿ, ಆಡಳಿತ ನಡೆಸಲಿ ಜನ ಸಾಮಾನ್ಯರ ಸಮಸ್ಯೆಗಳು, ಗ್ರಾಮ ಮಟ್ಟದ ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ, ಉದ್ಯೋಗ, ವೇತನ ಭದ್ರತೆ ಆಗ್ರಹಿಸಿ ಮುಂದೆಯೂ ಸತ್ಯಾಗ್ರಹಗಳನ್ನು ನಡೆಸಲಾಗುವುದು. ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿರುವ ಬೇಡಿಕೆಗಳ ಬಗ್ಗೆ ಯಾವುದೇ ರಾಜಿ ಸೂತ್ರ ಅನುಸರಿಸಲಾಗುವುದಿಲ್ಲ ಎಂದು ಸುದತ್ತ ಹೇಳಿದರು.

 

ಕೊಣಾಜೆಕಲ್ಲು ಸಿದ್ಧಾಶ್ರಮಕ್ಕೆ ಡೋರ್‍ನಂಬ್ರ ವಿವಾದ:

ಯಾವುದೇ ವಾರಿಸುದಾರರು ಇಲ್ಲದ ಕೊಣಾಜೆಕಲ್ಲು ಸಿದ್ಧಾಶ್ರಮಕ್ಕೆ 2011-12ನೇ ಸಾಲಿನಲ್ಲಿ ಶಿರ್ತಾಡಿ ಗ್ರಾ.ಪಂ. ಕಟ್ಟಡ ಸಂಖ್ಯೆ ನೀಡಿರುವುದು ನಿಯಮ ಬಾಹಿರವಾಗಿದ್ದು ಕೂಡಲೇ ಇದನ್ನು ರದ್ದು ಪಡಿಸಬೇಕು. ನಿತ್ಯ ನೂರಾರು ಮಂದಿ ಪ್ರವಾಸಿಗರು ಇಲ್ಲಿಗೆ ಬರುತ್ತಿರುವುದನ್ನು ಗಮನಿಸಿ ಸೂಕ್ತ ಶುಲ್ಕ ವಿ„ಸಿ ಗ್ರಾ.ಪಂ.ಗೆ ಆದಾಯ ಲಭಿಸುವಂತೆ ಮಾಡಬೇಕು ಎಂದು ತಾವು ಮಾಡಿದ ಒತ್ತಾಯಕ್ಕೆ ಪ್ರತಿಯಾಗಿ ಮಂಗಳೂರು ತಾ. ಪಂ. ಕಾ.ನಿ. ಅ„ಕಾರಿಯವರು ಸದ್ರಿ ವಿವಾದಿತ ಕಟ್ಟಡದ ಬಗ್ಗೆ ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿಕೊಂಡು, ಕಟ್ಟಡ ಸಂಖ್ಯೆ ರದ್ದುಪಡಿಸುವ ಬಗ್ಗೆ ಇರುವ ಕಾರಣಗಳನ್ನು ಉಲ್ಲೇಖಿಸಿ ಸಂಬಂಧಪಟ್ಟವರಿಗೆ ನೋಟೀಸು ನೀಡಲು ಗ್ರಾ.ಪಂ. ಪಿಡಿಓ ಅವರಿಗೆ ಸೂಚಿಸಿರುವ ಪತ್ರದ ಪ್ರತಿಯನ್ನು ಸುದತ್ತ ಹಾಜರುಪಡಿಸಿದರು. ಪಂ. ರಾಜ್ ಅ„ನಿಯಮಗಳನ್ವಯ ಸೂಕ್ತ ಕ್ರಮ ಜರಗಿಸಬೇಕೆಂದು ಸದ್ರಿ ಪತ್ರದಲ್ಲಿರುವುದನ್ನು ಸುದತ್ತ ಉಲ್ಲೇಖಿಸಿದರು. ಸುದ್ದಿಗೋಷ್ಟಿಯಲ್ಲಿ ಅ.ಭಾ. ಕಾರ್ಮಿಕ ಸಂಘದ ಜಿಲ್ಲಾ ಪ್ರ. ಕಾರ್ಯದರ್ಶಿ ದಿನೇಶ್ ಜೆ.ಪಿ. ಪಡುಕೊಣಾಜೆ, ಸದಸ್ಯರಾದ ಹರೀಶ್ ಶೆಟ್ಟಿ ಕಜೆ ಶಿರ್ತಾಡಿ, ಸಂದೀಪ್ ಸಾಲ್ಯಾನ್ ಶಿರ್ತಾಡಿ, ಮಹೇಂದ್ರ ಮಾಯಿಲೋಡಿ ಪಡುಕೊಣಾಜೆ ಉಪಸ್ಥಿತರಿದ್ದರು. 





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album