70 ವರ್ಷಗಳಿಂದ ಡಾಮಾರು ಕಾಣದ ಮುಂಡ್ಕೋಡಿ-ಕಲ್ಲಸಿ ರಸ್ತೆ!



 

 

ಮೂಡಬಿದಿರೆ: (ವೇಣೂರು); ಹೆಸರಿಗೆ ಅದೊಂದು ಜಿಲ್ಲಾ ಪಂಚಾಯತ್ ರಸ್ತೆ. ಡಾಮರು ಕಾಣದೆ ಏಳು ದಶಕಗಳು ಕಳೆದಿದೆಯಂತೆ. ಪ್ರಯಾಣಿಕರಿಗೆ ಕಲ್ಲುಗಳ ರಾಶಿಯನ್ನು ಏರಿ ಪ್ರಯಾಣಿಸುವ ಜೊತೆ ದೂಳು ಸೇವಿಸುವುದೂ ಇಲ್ಲಿ ಅನಿವಾರ್ಯ. ಜನ ಪ್ರತಿನಿಧಿಗಳ ಕೈ ಕಾಲು ಹಿಡಿದು ಕಾತು ಕುಳಿತು ಸೋತ ಸ್ಥಳೀಯರು ಇದೀಗ ಉಗ್ರ ಹೋರಾಟಕ್ಕೆ ಸಮಿತಿ ರಚಿಸಿ ರೂಪು ರೇಷೆ ಸಿದ್ದಪಡಿಸಿಕೊಂಡಿದ್ದಾರೆ.

 

 

ಇದು ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬೆದ್ರಡ್ಕ -ಕಲ್ಲಸಿ ರಸ್ತೆಯ ಕಥೆ. ಇಲ್ಲಿ ಬೆಳ್ತಂಗಡಿಯಿಂದ ಪೆರಾಡಿಗೆ ಸಂಚರಿಸಲು ಬಹುತೇಕ ಬಸ್ಸುಗಳಿಗೆ ಪರವಾನಿಗೆ ಇದೆಯಾದರೂ ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಬಸ್ಸುಗಳು ಪ್ರಯಾಣ ಸ್ಥಗಿತಗೊಳಿಸಿ, ಕೇವಲ ಒಂದು ಬಸ್ಸು ಮಾತ್ರ ಸಂಚರಿಸುತ್ತಿದೆ. ಈ ರಸ್ತೆಯು ಸುಮಾರು ಐದು ಕಿ ಮೀ ನಷ್ಟು ಉದ್ದ ಇದ್ದು, ಇದರಲ್ಲಿ ಎರಡು ಕಿ ಮೀ ರಸ್ತೆ ತೀರ ಹದಗೆಟ್ಟಿದೆ. ಸ್ಥಳೀಯರ ಪ್ರಕಾರ ಇದು ಡಾಮಾರೀಕರಣವಾಗದೆ ಬರೋಬ್ಬರಿ ಎಪ್ಪತ್ತು ವÀರ್ಷ ಕಳೆದಿದೆಯಂತೆ.

 

 

 

 

ಈ ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಮನೆಗಳಿದ್ದು, ವಾಹನಗಳ ಓಡಾಟದಿಂದ ಉಂಟಾಗುವ ದೂಳು ರಸ್ತೆ ಪಕ್ಕದ ಮನೆಗಳಿಗೂ ಮಾರಕವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಸ್ತೆಯಲ್ಲಿ ರಾಶಿ ಬಿದ್ದಿರುವ ಕಲ್ಲುಗಳಲ್ಲಿ ವಾಹನಗಳ ಸಂಚಾರ ಕಷ್ಟ ಸಾದ್ಯವಾಗಿದ್ದು, ಸ್ಥಳಿಯರು ಹಲವು ಬಾರಿ ಶಾಸಕ ವಸಂತ ಬಂಗೇರ ಮತ್ತು ಸಂಸದ ನಳಿನ್ ಕುಮಾರ್‍ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗದೆ ಕೇವಲ ಭರವಸೆ ಮಾತ್ರ ಪಡೆಯುವಂತಾಗಿದೆ. ಈದೀಗ ರಸ್ತೆ ಸಂಚಾರಕ್ಕೆ ತೀರಾ ಅಯೋಗ್ಯವಾಗಿದ್ದು, ದಾರಿ ಕಾಣದಂತಾದ ಊರವರು ಹೋರಾಟಕ್ಕೆ ಸಮಿತಿ ರಚಿಸಿಕೊಂಡಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album