ಆಳ್ವಾಸ್ ಪ್ರೌಢ ಶಾಲೆ: ಸತತ 6ನೇ ಬಾರಿಗೆ ಶೇ100 ಫಲಿತಾಂಶ



 

ಮೂಡುಬಿದಿರೆ: ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಇಲ್ಲಿನ ಆಳ್ವಾಸ್ ಪ್ರೌಢ ಶಾಲೆ ಸತತ 6ನೇ ಬಾರಿಗೆ ಶೇ 100 ಫಲಿತಾಂಶ ದಾಖಲಿಸಿದೆ. ಆರಂಭಿಕ ವರ್ಷದಿಂದ ಈ ವರೆಗೂ ನಿರಂತರ ನೂರು ಶೇಕಡಾ ಫಲಿತಾಂಶ ಪಡೆಯುತ್ತಿರುವುದು ಆಳ್ವಾಸ್ ಪ್ರೌಢಶಾಲೆಯ ದಾಖಲೆಯಾಗಿದೆ. ಆಳ್ವಾಸ್ ವಿದ್ಯಾರ್ಥಿ ಕೊಲಾರ ಮೂಲದ ಗೋಕುಲ್ ರೆಡ್ಡಿ 615 ( ಶೇ 98.40) ಅಂಕಗಳಿಕೆಯೊಂದಿಗೆ ಆಳ್ವಾಸ್ ಮಾತ್ರವಲ್ಲ ಮೂಡುಬಿದಿರೆ ವಲಯದಲ್ಲಿ ವೈಯಕ್ತಿಕ ಅಂಕ ಗಳಿಕೆಯ ಸಾಧನೆಯಲ್ಲಿ ಅಗ್ರಸ್ಥಾನಿಯಾಗಿದ್ದಾನೆ. ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದ್ದಾರೆ. 

 

 

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಪರೀಕ್ಷೆಗೆ ಹಾಜರಾದ 228 ವಿದ್ಯಾರ್ಥಿಗಳ ಪೈಕಿ 149 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 76 ಮಂದಿ ಪ್ರಥಮ ದರ್ಜೆ ಹಾಗೂ 3 ಮಂದಿ ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಪೈಕಿ 17 ಮಂದಿ ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳಿಕೆಯ ಸಾಧನೆ ಮಾಡಿದ್ದಾರೆ. ವಲಯಕ್ಕೆ ಅಗ್ರಸ್ಥಾನಿಯಾಗಿರುವ ಆಂಗ್ಲ ಮಾಧ್ಯಮದ ವಿದ್ಯಾರ್ಥಿ ಗೋಕುಲ್ ರೆಡ್ಡಿ ಕನ್ನಡದಲ್ಲಿ 124, ಇಂಗ್ಲೀಷಿನಲ್ಲಿ 97, ಹಿಂದಿಯಲ್ಲಿ 97 ಗಣಿತದಲ್ಲಿ 100, ವಿಜ್ಞಾನದಲ್ಲಿ 99, ಸಮಾಜ ಪರೀಕ್ಷೆಯಲ್ಲಿ 98 ಹೀಗೆ ಒಟ್ಟು 615 ಅಂಕಗಳನ್ನು ಪಡೆದಿದ್ದಾರೆ ಎಂದವರು ವಿವರಿಸಿದರು. 

 

ಬಹುಮುಖ ಪ್ರತಿಭೆಗಳು: ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಸಾಧನೆ ಮಾತ್ರವಲ್ಲದೇ ಕ್ರೀಡೆ, ಸಾಂಸ್ಕøತಿಕ ರಂಗದಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದವರಾಗಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿಗಳ ಪೈಕಿ 15 ಮಂದಿ ಸಂಗೀತ ಮತ್ತು ನೃತ್ಯದ ಜೂನಿಯರ್ ಪರೀಕ್ಷೆಯಲ್ಲಿ ಶೇ 100 ಫಲಿತಾಂಶದೊಂದಿಗೆ ಉನ್ನತ ದರ್ಜೆಯಲ್ಲಿ ಪಾಸಾಗಿದ್ದರು. ಕ್ರೀಡಾ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 24 ಸ್ವರ್ಣ ಪದಕ, 18 ರಜತ ಹಾಗೂ 7 ಕಂಚಿನ ಪದಕ ಪಡೆದಿದ್ದು ರಾಷ್ಟ್ರಮಟ್ಟದಲ್ಲಿಯೂ 30 ಚಿನ್ನ, 13 ರಜತ ಪದಕಗಳ ವಿಜೇತರಾಗಿದ್ದಾರೆ. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 10 ಪ್ರಥಮ ಹಾಗೂ 2 ದ್ವಿತೀಯ ಸ್ಥಾನ ಪಡೆದ ಪ್ರತಿಭೆಗಳು ಈ ಬಳಗದಲ್ಲಿವೆ. ಆಳ್ವಾಸ್ ವಿದ್ಯಾರ್ಥಿಗಳ ಈ ಸಾಧನೆಯಿಂದ ಸಂತಸವಾಗಿದೆ ಎಂದು ಡಾ. ಎಂ. ಮೋಹನ ಆಳ್ವ ತಿಳಿಸಿದರು. 





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album