ಮಾನವ ಹಕ್ಕು ಅಧ್ಯಕ್ಷರ ಅಧಿಕಾರ ಹಸ್ತಾಂತರ



 

ಮೂಡುಬಿದಿರೆ: ಭೃಷ್ಠಾಚಾರ ವಿರೋಧಿ ಹಾಗೂ ಮಾನವ ಹಕ್ಕು ಸಂಸ್ಥೆ ನವದೆಹಲಿ ಇದರ ಮೂಲ್ಕಿ ಮೂಡುಬಿದಿರೆ ವಲಯದ ಅಧ್ಯಕ್ಷ ಸ್ಥಾನದ ಅದಿಕಾರ ಹಸ್ತಾಂತರದ ಕಾರ್ಯಕ್ರಮ ಸಮಾಜ ಮಂದಿರ ಸಭಾದ ಮೀಟಿಂಗ್ ಹಾಲ್‍ನಲ್ಲಿ  ನಡೆಯಿತು. 

 

 

ಜಿಲ್ಲಾ ಸಲಹೆಗಾರ ಹಾಗೂ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ರತ್ನಾಕರ ದೇವಾಡಿಗ ಅವರಿಗೆ ವಲಯದ ನಿಕಟಪೂರ್ವ ಅಧ್ಯಕ್ಷ ಯುವರಾಜ ಜೈನ್ ಅವರು ದಾಖಲೆಗಳನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ನೀಡಿದರು.  ವಕೀಲ ಶಾಂತಿಪ್ರಸಾದ್ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೆಲವರಿಗೆ ಜನಬಲ, ಹಣಬಲ, ಅಧಿಕಾರದ ಬಲ ಇರುವುದರಿಂದ ಅವರು ತಮಗೆ ಆಗದೆ ಇದ್ದವರ ಮೇಲೆ ಪೊಲೀಸ್ ಇಲಾಖೆಯ ಮೂಲಕ ದೌರ್ಜನ್ಯವನ್ನು ನಡೆಸುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಇದಕ್ಕಾಗಿ  ಸಂಸ್ಥೆಯನ್ನು ಹುಟ್ಟು ಹಾಕಲಾಗಿದ್ದು ಈ ಮೂಲಕ ದೌರ್ಜನ್ಯ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲಾಗುತ್ತಿದೆ ಎಂದು ಹೇಳಿದರು. 

 

ಅಧಿಕಾರವನ್ನು ವಹಿಸಿಕೊಂಡ ರತ್ನಾಕರ ದೇವಾಡಿಗ ಮಾತನಾಡಿ ಸರ್ಕಾರಿ ಕಚೇರಿಗಳಾದ ಪುರಸಭೆ, ಗ್ರಾ.ಪಂಚಾಯತ್, ತಹಶೀಲ್ದಾರ್ ಕಛೇರಿಗಳಲ್ಲಿ ಲಂಚದ ಮೂಲಕ ಭ್ರಷ್ಠಾಚಾರ ಹೆಚ್ಚುತ್ತಿದೆ ಇದನ್ನು ತಡೆಗಟ್ಟುವಲ್ಲಿ ತನ್ನ ಜತೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು. ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್, ರಾಜ್ಯ ಮಾನವ ಹಕ್ಕು ಮತ್ತು ಭೃಷ್ಠಾಚಾರ ವಿರೋಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಷಾ ಶೈಲೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಸಮಿತಿಯ ವಲಯ ಉಪಾಧ್ಯಕ್ಷ ಸುಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ, ಕೋಶಾಧಿಕಾರಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ನಿಕಟ ಪೂರ್ವ ಅಧ್ಯಕ್ಷ ಯುವರಾಜ ಜೈನ್ ಸ್ವಾಗತಿಸಿದರು. ಅನಿತಾ ಬಲ್ಲಾಳ್ ಕಾರ್ಯಕ್ರ ನಿರೂಪಿಸಿ ವಂದಿಸಿದರು.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album