ಎಕ್ಸಲೆಂಟ್ `ಎಕ್ಸ್‍ಸೈನ್ಶಿಯಾಕ್ಕೆ ಚಾಲನೆ



 

ಮೂಡುಬಿದಿರೆ: ಸಕಾರತ್ಮಕ ಚಿಂತನೆ, ಒತ್ತಡಗಳಿಗೆ ಸವಾಲೊಡ್ಡಿ ಗೆಲ್ಲುವ ಮನಸು, ಪರಿಶ್ರಮ ಸಮರ್ಥವಾಗಿ ಉಪಯೋಗಿಸಿಕೊಂಡರೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಸಾಮಥ್ರ್ಯ ಸಾಧನೆಯಾಗುತ್ತದೆ. ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾದ ಪಿಯುಸಿ ಶಿಕ್ಷಣ ಸಂದರ್ಭದಲ್ಲೇ ಇಂತಹ ಹಾದಿಯಲ್ಲಿ ಮುನ್ನಡೆದರೆ ಜೀವನವನ್ನೇ ಬದಲಾಯಿಸಬಹುದು. ಪಠ್ಯದ ವಿಷಯಗಳ ಬಗ್ಗೆ ಆಸಕ್ತಿ ಅಧ್ಯಯನ, ವಾರಕ್ಕೊಮ್ಮೆ ಅಧ್ಯಯನ ಅವಲೋಕನ, ಸಹಪಾಠಿಗಳೊಂದಿಗೆ ಪಠ್ಯದ ಸಂವಹನ ಎಂದು ಹಾಲ್ದೊಡ್ಡೇರಿ ಸುಧೀಂದ್ರ ಹೇಳಿದರು. 

 

 

ಕಲ್ಲಬೆಟ್ಟುವಿನ ಎಕ್ಸಲೆಂಟ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾಲ ನಡೆಯುವ `ಎಕ್ಸ್‍ಸೈನ್ಶಿಯಾ-2015’ ಎರಡು ದಿನಗಳ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್,  ಆಡಳಿತಾಧಿಕಾರಿ ಡಾ.ಶ್ರುತಕೀರ್ತಿರಾಜ್, ಪ್ರಾಂಶುಪಾಲ ಸುರೇಶ್ ಬಾಬು ಉಪಸ್ಥಿತರಿದ್ದರು.  ವಕೀಲ ಬಿ.ಕೆ ಧನಂಜಯ ರಾವ್ ಕಾನೂನು ಮಾಹಿತಿ, ಉಡುಪಿಯ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಹಾವು ಮತ್ತು ಪರಿಸರದ ಬಗ್ಗೆ ಮಾಹಿತಿ ನೀಡಿದರು. ಉಡುಪಿಯ ಖ್ಯಾತ ಉಪನ್ಯಾಸಕ ವಿಜ್ಞಾನಿ ಪ್ರೊ.ಎ.ಪಿ ಭಟ್ ಖಗೋಳ ವಿಜ್ಞಾನದ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು. ವರ್ಧಿನಿ ಟಿ.ಎಸ್ ಸ್ವಾಗತಿಸಿದರು. ಶ್ರೇಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  

 

ಎಕ್ಸ್‍ಸೈನ್ಶಿಯಾದಲ್ಲಿ ಇಂದು: ಮೇ.20ರಂದು ಬೆಳಿಗ್ಗೆ ಪಕ್ಷಿಶಾಸ್ತ್ರಜ್ಞ ಡಾ.ಕೃಷ್ಣ ಮೋಹನ್ ಪಶ್ಚಿಮ ಘಟ್ಟದ ಹಕ್ಕಿಗಳ ವೈವಿಧ್ಯತೆಯ ಕುರಿತು ಉಪನ್ಯಾಸ ನೀಡಲಿದ್ದಾರೆ. ನಂತರ ಖ್ಯಾತ ರಂಗಕರ್ಮಿ ಜೀವನ್ ರಾಮ್ ಸುಳ್ಯ ಅವರಿಂದ ತರಬೇತಿ ಕಾರ್ಯಕ್ರಮ ನಡೆಯಲಿದೆ.





Write your Comments on this Article
Your Name
Place
Your E-mail
Your Comment   You have characters left.
Security Validation
Enter the security validation code as displayed above:
    
Disclaimer: Kindly do not post any abusive, defamatory, infringing, obscene, indecent, discriminatory or unlawful material or SPAM. Editor reserves the right to block/ remove without notice any content received from users.
Suvarna News 24X7 Live online
333 Album